running mate
ನಾಮವಾಚಕ

(ಅಮೆರಿಕನ್‍ ಪ್ರಯೋಗ)

  1. ಉಪಾಭ್ಯರ್ಥಿ; ಚುನಾವಣೆಯಲ್ಲಿ ಕೆಳಗಿನ ಯಾ ಎರಡನೆಯ ಸ್ಥಾನಕ್ಕೆ ನಿಲ್ಲುವ ಅಭ್ಯರ್ಥಿ.
  2. ಜೊತೆ ಕುದುರೆ; ಪಂದ್ಯದಲ್ಲಿ ಗೆಲ್ಲಬೇಕೆಂದಿರುವ ಕುದುರೆಗೆ ಓಡುವ ವೇಗ ನಿರ್ಧರಿಸಲು ಸಹಾಯಕ್ಕಾಗಿ ಅದರ ಜೊತೆಯಲ್ಲಿ ಓಡಲು ಆರಿಸಲಾಗುವ ಅದೇ ಲಾಯದ ಬೇರೆ ಕುದುರೆ.